ಟಿಪ್ಪು: ಸುಲ್ತಾನನೋ.. ಸೈತಾನನೋ?

ಆತ ಸ್ವ-ತಂತ್ರ ಹೋರಾಟಗಾರನೇ ಹೊರತು ಸ್ವಾತಂತ್ರ್ಯ ಹೋರಾಟಗಾರನಲ್ಲಾ.!!
#BanTippuJayanthi

ನಿಲುಮೆ

– ರೋಹಿತ್ ಚಕ್ರತೀರ್ಥ

11Fir08.qxpಕರ್ನಾಟಕ ಸರಕಾರ 2015ನೇ ಇಸವಿಯ ನವೆಂಬರ್ 10ರಂದು ಟಿಪ್ಪು ಸುಲ್ತಾನನ ಜಯಂತಿಯನ್ನು ಆಚರಿಸಿತು. ಈ ಸರಕಾರೀ ಕಾರ್ಯಕ್ರಮವನ್ನು ನಡೆಸಲು ಪ್ರತಿ ಜಿಲ್ಲೆಗೆ 50 ಸಾವಿರ ಮತ್ತು ಪ್ರತಿ ತಾಲೂಕಿಗೆ 25 ಸಾವಿರ ರುಪಾಯಿಗಳಂತೆ ಒಟ್ಟು 80 ಲಕ್ಷವನ್ನು ವ್ಯಯಿಸಲಾಯಿತು. ನಾಡಹಬ್ಬ ದಸರಾ ಆಚರಿಸಲು ದುಡ್ಡಿಲ್ಲದೆ ಪರದಾಡುತ್ತಿದ್ದ ಸರಕಾರಕ್ಕೆ ಟಿಪ್ಪು ಜಯಂತಿ ಎಂಬ ಹೊಸ ಸಂಪ್ರದಾಯವನ್ನು ಹುಟ್ಟುಹಾಕಲು ಇಷ್ಟೊಂದು ದುಡ್ಡು ಎಲ್ಲಿಂದ ಸಿಕ್ಕಿತು ಎನ್ನುವುದು ಯಕ್ಷಪ್ರಶ್ನೆ! ಇರಲಿ, ಈ ಜಯಂತಿಯಾದರೂ ಸುಸೂತ್ರವಾಗಿ ನಡೆದಿದ್ದರೆ; ಒಂದಷ್ಟು ಒಳ್ಳೆಯ ಕೆಲಸಗಳು ಆ ಮೂಲಕವಾದರೂ ಆಗಿದ್ದರೆ ರಾಜ್ಯದ ಜನ ನೆಮ್ಮದಿ ಕಾಣುತ್ತಿದ್ದರೋ ಏನೋ. ಆದರೆ, ಈ ಜಯಂತಿ ಜನರ ಕಾರ್ಯಕ್ರಮವಾಗದೆ ಕೇವಲ “ಸರಕಾರಿ ಆಚರಣೆ” ಮಾತ್ರವೇ ಆಗಿ ಉಳಿಯಿತು. ತನ್ನ ಸಮಸ್ತ ಜನತೆಯನ್ನು ವಿಶ್ವಾಸಕ್ಕೆ ತೆಗೆದುಕೊಂಡು ಎಲ್ಲರಿಗೆ ಮೆಚ್ಚಿಕೆಯಾಗುವ ಕೆಲಸ ಮಾಡುವ ಅವಕಾಶವನ್ನು ತಾನಾಗಿ ಕೈಚೆಲ್ಲಿ ಸರಕಾರ ಒಂದು ಗುಂಪಿನ ಮನಮೆಚ್ಚಿಸಲು ಹೋಗುವುದು ಅಗತ್ಯವಿತ್ತೆ ಎಂಬ ಪ್ರಶ್ನೆ ಎದ್ದಿತು. ಸರಕಾರದ ನಡೆಯನ್ನು ಸಮರ್ಥಿಸಿಕೊಳ್ಳುತ್ತ ಒಬ್ಬ ಬುದ್ಧಿಜೀವಿ, “ಈಗಾಗಲೇ ಹಲವು ಜಾತಿ-ಕೋಮುಗಳ ಜನರಿಗೆ ಬೇಕಾದ ಜಯಂತಿಗಳಿವೆ. ಆದರೆ ಮುಸ್ಲಿಮರಿಗೆ ಹೇಳಿಕೊಳ್ಳುವಂಥ ಯಾವುದೇ ಸರಕಾರೀ ಕಾರ್ಯಕ್ರಮ ಇರಲಿಲ್ಲ. ಈಗ ಶುರುಮಾಡಿರುವ ಜಯಂತಿಯನ್ನು ಆ ನಿಟ್ಟಿನಲ್ಲಿ ಯೋಚಿಸಿ ಸ್ವಾಗತಿಸಬೇಕು” ಎಂಬ ಮಾತುಗಳನ್ನು ಆಡಿದರು. ಜಯಂತಿಗಳನ್ನು ರಾಜ್ಯದಲ್ಲಿರುವ ವಿವಿಧ ಜಾತಿ-ಪಂಗಡಗಳನ್ನು ಮೆಚ್ಚಿಸಲಿಕ್ಕಾಗಿ ಆಚರಿಸಲಾಗುತ್ತದೆ ಎಂಬ ಸತ್ಯ ಅವರ ಈ ಮಾತುಗಳ ಮೂಲಕ ಹೊರಬಿದ್ದಿದೆ. ಟಿಪ್ಪು ಜಯಂತಿಯನ್ನು ಆಚರಿಸಿರುವುದು ಕೇವಲ ಮುಸ್ಲಿಮ್ ಸಮುದಾಯವನ್ನು ಮೆಚ್ಚಿಸಲಿಕ್ಕಾಗಿ ಎಂಬ ಸರಕಾರದ ಅಜೆಂಡವನ್ನು ಸರಕಾರೀ ಸಾಹಿತಿ…

View original post 3,256 more words

Leave a comment